Namastegang
Kannada Bookset - II
Kannada Bookset - II
1) Alilu Seeve - ಅಳಿಲು ಸೇವೆ :
ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ, ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ, ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ ಇವರ ಮಗಳ “ಅಮ್ಮ ಹೊಸ ಕತೆ" ಎಂಬ ಬೇಡಿಕೆ.
ಯಶಸ್ವಿನಿ ಎಸ್ ಎನ್ ಅವರು ಬರೆದ 'ಅಳಿಲು ಸೇವೆ' ಪುಸ್ತಕದಲ್ಲಿ ಚಿನ್ನಿ ಎಂಬ ಪುಟ್ಟ ಹುಡುಗಿಯ ಮುದ್ದಾದ ಕತೆಯಿದ್ದು, ರೆನೆಸಾ ಗುಹಾ ಬಿಡಿಸಿದ ಬಣ್ಣ ಬಣ್ಣದ ಚಿತ್ರವಿರುವ ಈ ಪುಸ್ತಕ ಮಕ್ಕಳ ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.
2) Chinniya Rajayi - ಚಿನ್ನಿಯ ರಜಾಯಿ :
ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ, ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ, ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ ಇವರ ಮಗಳ “ಅಮ್ಮ ಹೊಸ ಕತೆ" ಎಂಬ ಬೇಡಿಕೆ.
ಯಶಸ್ವಿನಿ ಎಸ್ ಎನ್ ಅವರು ಬರೆದ 'ಚಿನ್ನಿಯ ರಜಾಯಿ' ಪುಸ್ತಕದಲ್ಲಿ ಚಿನ್ನಿ ಎಂಬ ಪುಟ್ಟ ಹುಡುಗಿಯ ಮುದ್ದಾದ ಕತೆಯಿದ್ದು, ಅರುಣ್ ಪ್ರಕಾಶ್ ಬಿಡಿಸಿದ ಬಣ್ಣ ಬಣ್ಣದ ಚಿತ್ರವಿರುವ ಈ ಪುಸ್ತಕ ಮಕ್ಕಳ ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.
3) Rikki Rikshannaa - ರಿಕ್ಕು ರಿಕ್ಷಣ್ಣಾ
ವೃತ್ತಿಯಿಂದ ಇಂಜಿನಿಯರ್ ಆಗಿರುವ ಅನುಪಮಾ ಕೆ ಬೆಣಚಿನಮರಡಿ ಅವರು ಒಬ್ಬ ಸೃಜನಶೀಲ ಬರಹಗಾರ್‍ತಿ. ಹಲವಾರು ಪತ್ರಿಕೆಗಳಿಗೆ ಮಕ್ಕಳ ಕತೆ, ಪ್ರಬಂಧ, ವಿಜ್ಞಾನ ಮತ್ತು ಜೀವವಿಜ್ಞಾನದ ಬರಹಗಳನ್ನು ಬರೆದಿದ್ದಾರೆ. ಪರಿಸರದ ಮೇಲೆ ತುಂಬ ಒಲವಿರುವ ಇವರಿಗೆ, ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸುತ್ತಮುತ್ತಲಿನ ಪಕ್ಷಿ ಮತ್ತು ಕೀಟ ಪ್ರಪಂಚವನ್ನು ಗಂಟೆಗಟ್ಟಲೆ ಗಮನಿಸುತ್ತಾ ಅವರ ಪ್ರಶ್ನೆಗಳಿಗೆ ಉತ್ತರಿಸುವುದೆಂದರೆ ತುಂಬ ಇಷ್ಟ. ಪ್ರಾಣಿಗಳೊಂದಿಗೆ ಮಾತಾಡಬಲ್ಲ ರಿಕ್ಕು ಎಂಬ ಒಂದು ಚಂದದ ರಿಕ್ಷಾದ ಕತೆಯನ್ನು “ರಿಕ್ಕು ರಿಕ್ಷಣ್ಣಾ” ದಲ್ಲಿ ಅನುಪಮಾ ಹೇಳಿದ್ದಾರೆ. ಒಂದೊಂದು ಪುಟದಲ್ಲೂ ಸಂತೋಷ್ ಸಸಿಹಿತ್ಲು ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.